ಎಲ್ಲರಂತವಳಲ್ಲ ...
ಮುಂಜಾನೆ ಅರಳುವ ತಾವರೆಯಂತವಳು
ಪರಿಮಳ ಸೂಸುವ ಮಲ್ಲಿಗೆಯಂತವಳು
ತುಟಿಯಂಚಲೆ ತುಂಟ ನಗು ಬೀರುವಂತವಳು
ಎಲ್ಲರಂತವಳಲ್ಲ ನನ ತಂಗಿ
.
ಪ್ರಶ್ನೆಗಳಿಗೆ ಮೌನದಲೆ ಉತ್ತರಿಸುವಂತವಳು
ಬಾಯಿ ತೆರೆದರೆ ಮುತ್ತನೆ ಉದುರಿಸುವಂತವಳು
ಕಣ್ಣ ನೋಟದಲೆ ನನ್ನ ಗದರಿಸುವಂತವಳು
ಎಲ್ಲರಂತವಳಲ್ಲ ನನ ತಂಗಿ
.
ಕೈಗಳೇ ಸೋತರು, ಹೃದಯವೇನು ಸೋತಿಲ್ಲ
ನೋವನೇ ತಿಂದರು, ನಗುದನೇನು ಮರೆತಿಲ್ಲ
ಕಷ್ಟವೇ ಬಂದರು, ಉತ್ಸಾಹವೇನು ಕುಗ್ಗಿಲ್ಲ
ಎಲ್ಲರಂತವಳಲ್ಲ ನನ ತಂಗಿ
.
ಜೊತೆಗೇನು ಹುಟ್ಟಿಲ್ಲ, ಜೊತೆಗೇನು ಬೆಳೆದಿಲ್ಲ
ಹಂಚಿಕೊಂಡ ಭಾವನೆಗಳ ನೆನಪಿನ್ನು ಮಾಸಿಲ್ಲ
ಜೊತೆಯಲೇ ಇರಬೇಕೆಂಬ ತವಕವಿನ್ನು ಬತ್ತಿಲ್ಲ
ಎಲ್ಲರಂತವಳಲ್ಲ ನನ ತಂಗಿ
.
ಮಮತೆಯನೆ ಉಣಬಡಿಸುವಂತವಳು
ನನ್ನ ಕೈ ಹಿಡಿದು ನಡೆಸುವಂತವಳು
ನನಗೆ ತಾಯಿಯಂತವಳು
ಎಲ್ಲರಂತವಳಲ್ಲ ನನ ತಂಗಿ
4 comments:
Yellarantahavaralla namma umashankar Really super .......
paccu ...
ನಾನು ಹತ್ತರಲ್ಲಿ ಹನ್ನೊಂದು ಅಷ್ಟೆ ...
ಓದಿದಕ್ಕೆ ಧನ್ಯವಾದಗಳು ...
- ಉಮಾಶಂಕರ್
Hoovondu Aralalu Sooryana Hongirana Beku,
"Kavithe"yondu Aralalu Manassina Bavanegale Saku,
Nimma Kavana galalli Bavanegalige Jeeva Tumbiddiri,
Tumba Esta aytu sir,
Hege Baritha iri.....
Rahul Hebbar
ಭಾವನೆ ಇನ್ನಷ್ಟು ಶ್ರೀಮಂತವಾಗಲು... ಓದುಗನ ಹುರಿದುಂಬಿಸುವ ಮಾತುಗಳು ತುಂಬ ಸಹಾಯ ಮಾಡುತ್ತೆ ...
ಧನ್ಯವಾದಗಳು ...
- ಉಮಾಶಂಕರ್
Post a Comment