ಅಣಕು ಗೀತೆ ... ಮಿಂಚಾಗಿ ನೀನು ಬರಲು
( ಜಯಂತ್ ಕಾಯ್ಕಿಣಿಯವರ ಕ್ಷಮೆ ಕೋರಿ.. )
.
ಬಾಗಿಲು ದಢಾರೆನ್ನಲು, ನಿಂತಲ್ಲಿಯೆ ಮಳೆಗಾಲ
ಬೆಚ್ಚನೆ ಹೊದಿಕೆ ಇರಲು, ಕೂತಲ್ಲಿಯೆ ಚಳಿಗಾಲ
ಪವರ್ ಕಟ್ ಶುರುವಾಗಲು, ಮತ್ತದೆ ಬೇಸಿಗೆಕಾಲ
ಇನ್ನೆಲ್ಲಿದೆ ನನ್ನ ನಿದ್ದೆಗೆ ಉಳಿಗಾಲ????
.
ಬಾಗಿಲು ದಢಾರೆನ್ನಲು, ನಿಂತಲ್ಲಿಯೆ ಮಳೆಗಾಲ..
.
ನಾ Bescom Power ಗೆ ಚಂದಾದಾರನು
Fan ಗಾಳಿ ಬೀಸದೆ ನಾ ಮಲಗಲಾರೆನು
ನಾ ಸೊಳ್ಳೆಯ ಹಸಿವೆಗೆ ಆಹಾರವಾದೆನು
ಸೊಳ್ಳೆಯ ಕಂಡ ಕ್ಷಣದಲೆ ಹೆದರಿ ಹೋದೆನು
ಕ್ಷಮಿಸು ನೀ ಕಿರಿಕಿರಿ, ಕೊಲ್ಲಲೇ ನಿನ್ನನು
ಹೇಳಿ ಕೇಳಿ ಮೊದಲೆ ಚೂರು ಪಾಪಿ ನೀನು.
.
ಬಾಗಿಲು ದಢಾರೆನ್ನಲು, ನಿಂತಲ್ಲಿಯೆ ಮಳೆಗಾಲ..
.
ನನ್ನ ಮನಕೆ ನೋವು ಕೊಡುವ ನೀನು ಮೋಸಗಾರ
ಕನ್ನ ಕೊರೆದು ದೋಚಿ ಕೊಂಡ ರಕ್ತಕ್ಕೆ ನೀನೆ ಹೊಣೆಗಾರ
ನನ್ನದೀ ವೇದನೆ ಯಾರಿಗೂ ನಾ ಹೇಳೆನು
ಹೇಳಿ ಕೇಳಿ ಮೊದಲೆ ಚೂರು ಕಳ್ಳ ನೀನು.
.
ಬಾಗಿಲು ದಢಾರೆನ್ನಲು, ನಿಂತಲ್ಲಿಯೆ ಮಳೆಗಾಲ..
10 comments:
Sakkat aagide... :)
wow!! very nice !!
ಸೂಪರ್, ಇನ್ನೆಲ್ಲಿ ಮಳೆಗಾಲ
innu swalpa chennagi bareyabahudittu ... any ways parvaagilla ...
really i like this this is my frvt song
ನಿಮ್ಮ ಕವಿತೆ ಓದಿ ಬಹಳ ದಿನಗಳ ನಂತರ ಗಾಳಿಪಟ ಹಾರಿಸಿದಷ್ಟು ಸಂತೋಷ ಅಯ್ತು.
ದನ್ಯವಾದಗಳು, ರಾಹುಲ್ ಹೆಬ್ಬಾರ್
ನಿಮ್ಮ ಕವಿತೆ ಓದಿ ಬಹಳ ದಿನಗಳ ನಂತರ ಗಾಳಿಪಟ ಹಾರಿಸಿದಷ್ಟು ಸಂತೋಷ ಅಯ್ತು.
ದನ್ಯವಾದಗಳು, ರಾಹುಲ್ ಹೆಬ್ಬಾರ್
Good one... Good experience..
ನನಗೆ ನಗು ಬರಿಸಿತು.
ಆದರೆ ಅಷ್ಟೊ೦ದು ರೊಮ್ಯಾ೦ಟಿಕ್ ಹಾಡನ್ನು ಹಾಸ್ಯಗೀತೆಯನ್ನಾಗಿಸಿದ್ದು ನ್ಯಾಯಾನ?
awesome,,,,,,,,,,,,,,,,heltene ninge jayant hatra,,,,,,very nice
Post a Comment