ಪರ್ವ ...
ಬೈರಪ್ಪನವರ ಕೃತಿ 'ಪರ್ವ' ಓದಿ ಮುಗಿಸಿದ ಮೇಲೂ ಕೆಲವು ದಿನ ಅದೇ ಗುಂಗಿನಲ್ಲಿದ್ದೆ. ಈಗ ಆ ನಶೆ ಇಳಿದು, ಪರ್ವದಲ್ಲಿ ಬರುವ ಪಾತ್ರಗಳ ನೆನಪು ಒಂದೊಂದಾಗಿ ಮಾಸಿ ಹೋಗುತ್ತಿದೆ. ಅದು ಪೂರ್ತಿ ಅಳಿಸಿ ಹೋಗುವ ಮೊದಲು ನನ್ನ ಚಿಂತನೆಗಳನ್ನು ದಾಖಲಿಸಲು ಹೊರಟಿದ್ದೇನೆ.
.
ಕೃತಿಯ ಬಗ್ಗೆ ಬರೆಯುವ ಮೊದಲು ಮಹಾಭಾರತವೆಂಬ ವಿಶಾಲವಾದ ಗ್ರಂಥ ಕನ್ನಡ ಸಾಹಿತ್ಯ ಪ್ರಪಂಚದಲ್ಲಿ ಬೀರಿದ ಪ್ರಭಾವದ ಬಗ್ಗೆ ಕಿರು ಪರಿಚಯ. ಕನ್ನಡದಲ್ಲಿ ಮೊದಲಿಗೆ ಮಹಾಭಾರತವನ್ನು ಬರೆದವನು ಆದಿಕವಿ ಪಂಪ. ಗದ್ಯ ಮತ್ತು ಪದ್ಯ ರೂಪದಲ್ಲಿ ಬರೆಯಲ್ಪಟ್ಟ 'ವಿಕ್ರಮಾರ್ಜುನ ವಿಜಯ' ಉತ್ತಮ ಕೃತಿ ಎಂದು ಪರಿಗಣಿಸಲ್ಪಟ್ಟಿದೆ. ಇದೇ ಸಮಯದಲ್ಲಿ ಬಂದ ರನ್ನನ 'ಗದಾ ಯುದ್ದಂ' ಭೀಮ ಮತ್ತು ಧುರ್ಯೊದನರ ಗದಾ ಯುದ್ದದ ಕುರಿತಾಗಿದೆ. ಕುಮಾರವ್ಯಾಸನ 'ಗದುಗಿನಭಾರತ' ಹೆಣ್ಣಿನ ಸೌಂದರ್ಯವನ್ನು ವರ್ಣಿಸುವ ಅವನ ರಸಿಕತೆಗೆ ಹೆಸರಾಗಿದೆ.
.
ಆಧುನಿಕ ಕನ್ನಡದಲ್ಲಿ ಬಂದ ಕೃತಿಗಳೆಂದರೆ ಎ.ಅರ್ ಕೃಷ್ಣಶಾಸ್ತ್ರಿಗಳ 'ವಚನ ಭಾರತ' ಮತ್ತು ಬೈರಪ್ಪನವರ 'ಪರ್ವ'. ಇವೆಲ್ಲ ಮುಖ್ಯ ಕಥೆಯನ್ನು ಆದರಿಸಿ ಬರೆದ ಕೃತಿಗಳಾದರೆ, ಮಹಾಭಾರತದ ಉಪಕತೆಗಳನ್ನು ಅದರಿಸಿ ರಚಿಸಿದ ಕೃತಿಗಳೂ ಅನೇಕ. ಕುವೆಂಪು ಅವರ 'ಬೆರಳ್ಗೆ ಕೊರಳ್', ಬಿ.ಎಮ್ ಶ್ರೀಯವರ 'ಗದಾಯುದ್ದಂ', ಗೀರಿಶ್ ಕಾರ್ನಾಡ ಅವರ 'ಯಾಯತಿ' ಇತ್ಯಾದಿ ಉಪಕತೆಗಳನ್ನು ಆದರಿಸಿ ಬರೆದ ಕೃತಿಗಳು.
.
ಕೇವಲ ಉಪಕಥೆಗಳನ್ನು ಮಾತ್ರ ವಿಸ್ತರಿಸದೆ ಮಹಾಭಾರತಲ್ಲಿ ಬರುವ ೧೮ ಪರ್ವಗಳನ್ನೂ ವಿವರವಾಗಿ ಬಿಚ್ಚಿಡುವ ಬೈರಪ್ಪನವರ 'ಪರ್ವ' ಸಾಮಾನ್ಯ ವರ್ಗಕ್ಕೆ ಸೇರದ ಒಂದು ವಿಭಿನ್ನ ಕೃತಿ. ಬಹುಶಃ ಮಹಾಭಾರತದಲ್ಲಿನ ಪಾತ್ರಗಳ ಸ್ಥೂಲ ಪರಿಚಯವಿಲ್ಲದೆ ಈ ಕೃತಿಯ ಸವಿಯನ್ನು ಸವಿಯುವುದು ಕಷ್ಟವಾದೀತು. ಓದುಗನನ್ನು ಭೂತಕಾಲಕ್ಕೆ ಕೊಂಡೊಯ್ಯವ ಬೈರಪ್ಪನವರ ಕಲೆ ಅತ್ಯದ್ಬುತ.
.
ಪರ್ವದಲ್ಲಿ ಗಮನ ಸೆಳೆದ ಅಂಶವೆಂದರೆ 'ನಿಯೋಗ'. ಅಂದಿನ ಕಾಲದಲ್ಲಿ ಸಂತಾನ ಉತ್ಪತ್ತಿಗೆ ಎಲ್ಲರಿಂದಲೂ ಸ್ವೀಕರಿಸಲ್ಪಟ್ಟ ಪದ್ದತಿಯಾಗಿತ್ತು. ಗಂಡ ಶಕ್ತನಲ್ಲದಿದ್ದರೆ ವಂಶ ಮುಂದುವರೆಸಲು ಇನ್ನೊಬ್ಬನಿಂದ ವೀರ್ಯ ದಾನ ಪಡೆಯುವುದೇ ಈ ಪದ್ದತಿ. ನಿಯೋಗ ಪದ್ದತಿ ಧರ್ಮಸೂಕ್ಷ್ಮ ವಿಷಯವೆನಿಸುತ್ತದೆ. ಕುಂತಿ ನಿಯೋಗದಿಂದ ಪಡೆದ ಪಾಂಡವರಾಗಲಿ ಅಥವ ಕರ್ಣನಾಗಲಿ ವರಪುತ್ರರಲ್ಲ. ಬಹುಶಃ ಈಗಿನ ಮಡಿವಂತರಿ ಇದನ್ನು ಅರಗಿಸಿಕೊಳ್ಳುವುದು ಕಷ್ಟವೆನಿಸಬಹುದು.
.
ಪತಿವೃತೆಯೆಂದು ಕಣ್ಣಿಗೆ ಪಟ್ಟಿ ಕಟ್ಟಿ ಕೊಂಡ ಗಾಂಧಾರಿ ಹಸ್ತಿನಾವತಿಯ ಜನರಿಗೆಲ್ಲ ಪರಮ ಸ್ವಾದಿ. ಕುಂತಿಗೆ ರಾಜ ವೈಭವಗಳಿದ್ದರೂ, ವಯಸ್ಸಿಗೆ ಸಹಜವಾದ ಕಾಮನೆಗಳಿದ್ದರೂ ಪುರುಷತ್ವವನ್ನು ಕಳಕೊಂಡ ಪತಿ ಮಾತ್ರ ಅಶಕ್ತ. ಹುಟ್ಟು ಕುರುಡನಾದರು ಧೃತರಾಷ್ಟ್ರ ತನ್ನ ಕಾಮಾಗ್ನಿಯನ್ನು ಆರಿಸಲು ಬಳಸಿಕೊಳ್ಳುತ್ತಿದದ್ದು ದಾಸಿಯವರನ್ನ. ಯೌವನದ ಪ್ರಾರಂಭಿಕ ಹಂತದಲ್ಲೆ ಅತಿಯಾದ ಕಾಮಕೇಳಿಯಿಂದ ಪುರುಷತ್ವವನ್ನು ಕಳಕೊಂಡ ಪಾಂಡು, ಪುರುಷತ್ವವನ್ನು ಮರಳಿ ಪಡೆಯಲು ಮಾಡಿದ ಪ್ರಯತ್ನವೆಲ್ಲ ವ್ಯರ್ಥ. ಕ್ಷತ್ರಿಯರೆಲ್ಲ ಸ್ತ್ರೀಲೋಲುಪರೆಂದೆ ಬೈರಪ್ಪನವರ ಕೃತಿ ಹೇಳುತ್ತದೆ.
.
ಪಾಂಡವರಲ್ಲಿ ಭೀಮ ಮತ್ತು ಅರ್ಜುನ ಬಲಿಷ್ಠರು. ಧರ್ಮರಾಯ ಧರ್ಮಕ್ಕೆ ಕಟ್ಟು ಬೀಳುವ ಜಾಯಮಾನದ ಶಕ್ತಿಹೀನ ರಾಜ. ಭೀಮನದು ಧರ್ಮಕ್ಕೆ ಕಟ್ಟು ಬೀಳದ ಜಾಯಮಾನ. ಭೀಮನಿಗೆ ಅಣ್ಣನ ಮೇಲೆ ಯಾವಾಗಲು ಸಿಟ್ಟು. ಅರ್ಜುನ ಅಹಂಕಾರದ ಅಪ್ರತಿಮ ಬಿಲ್ಲುಗಾರ, ರಸಿಕ, ದ್ರೌಪದಿಯ ಪ್ರೀತಿಯನ್ನು ಆರಂಭದಲ್ಲಿ ಗಳಿಸಿಯೂ ಉಳಿಸಿಕೊಳ್ಳಲಾರದವನು, ಅಣ್ಣ ಧರ್ಮನ ಮಾತನ್ನು ಮೀರದವನು. ನಕುಲ ಸಹದೇವರನಂತೂ ಬೈರಪ್ಪನವರು ಮರೆತಂತಿದೆ. ದ್ರೌಪದಿಯ ಮತ್ತು ಭೀಮ ಸಮಾನ ಮನಸ್ಕರು. ಯಾವ ಕ್ಲಿಷ್ಟ ಕಾಲದಲ್ಲಾದರು ದ್ರೌಪದಿಗೆ ಸಹಾಯಕ್ಕೆ ಬರುವವನು ಭೀಮ. ದ್ರೌಪದಿಯಗೆ ಅವಳ ರೂಪವೇ ಶತ್ರು. ಹಸಿದ ಹೆಬ್ಬುಲಿಗಳಂತಿರುವ ಐವರು ಗಂಡಂದಿರ ಮದ್ಯೆ ಸಿಕ್ಕಿ ಶಯಾನಾಗಾರದಲ್ಲಿ ನರಳುವ ಅವಳ ಬಗ್ಗೆ ಕನಿಕರ ಮೂಡುತ್ತದೆ.
.
ಕೃಷ್ಣ ಎಲ್ಲದಕ್ಕು ಸೂತ್ರದಾರ. ಅವನಿಗೆ ಎಲ್ಲ ದೇಶದ ರಾಜ ಕಾರಣಗಳೂ ಬೇಕು. 'ಪರ್ವ' ದಲ್ಲಿ ಕೃಷ್ಣ ದೇವರಲ್ಲ. ಅವನೊಬ್ಬ ಕ್ಷತ್ರಿಯ ಅಷ್ಟೇ. ಜಯದ್ರಥನಿಗೆ ಹೆದರಿ ಮಥುರೆಯಿಂದ ದ್ವಾರೆಕೆಗೆ ಹೋಗುವಾಗ ಎಲ್ಲರ ಕೈಯಿಂದಲು ಛೀಮಾರಿ ಹಾಕಿಸಿಕೊಳ್ಳುತ್ತಾನೆ. ಆದರೆ ಸಮಯವರಿತು ಶತ್ರುವಿನ ಮೇಲೆ ಎರಗುವ ಅವನ ಯುದ್ದ ಕೌಶಲ್ಯ ಮೆಚ್ಚುವಂತಹುದು. ಬಲರಾಮನಿಗೆ ಕೌರವರ ಮೇಲೆ ಕಾಣದ ಕನಿಕರ. ಅದಕ್ಕೇ ಕೃಷ್ಣ ಮತ್ತು ಬಲರಾಮರಿಗೆ ಯಾವಾಗಲು ಶೀತಲ ಸಮರ.
.
ದುರ್ಯೋದನನಿಗೆ ಪಾಂಡವರನ್ನು ಕಂಡರೆ ಏನೋ ಹೊಟ್ಟೆಕಿಚ್ಚು. ಪಾಂಡವರೆಲ್ಲ ನಿಯೋಗದಿಂದ ಹುಟ್ಟಿದವರಾದ್ದರಿಂದ ಕುರುವಂಶದ ರಾಜ ನಾನೆಂಬ ಅಹಂಕಾರ. ಅದನ್ನೆ ಯುದ್ದದ ಸಮಯದಲ್ಲಿ ಹೇಳಿ, ನನ್ನದೆ ಧರ್ಮದ ಪಕ್ಷವೆಂದು ಎಲ್ಲ ರಾಜರ ಸಹಾಯ ಕೇಳುತ್ತಾನೆ.
.
ಕರ್ಣ ಮತ್ತು ದುರ್ಯೋದನ ಪ್ರಾಣ ಸ್ನೇಹಿತರು. ತನ್ನ ಹುಟ್ಟಿನ ರಹಸ್ಯವನ್ನು ಕೃಷ್ಣನಿಂದ ತಿಳಿದ ಮೇಲೆ ಅವನ ಮನಸ್ಸು ತಳಮಳಗೊಳ್ಳುತ್ತದೆ. ತಾನು ಕೌರವರ ಜೊತೆ ಮುಂದುವರಿಯ ಬೇಕೇ, ಇಲ್ಲ ಪಾಂಡವರನ್ನು ಸೇರಿಕೊಳ್ಳಲೇ, ಇಲ್ಲ ಎಲ್ಲವನ್ನು ಬಿಟ್ಟು ವನವಾಸ ಮಾಡಲೇ? ಕರ್ಣ ಹೋದಲ್ಲೆಲ್ಲ ಅವನನ್ನು ಹಿಂಬಾಲಿಸುವ ಅವನ ನಾಯಿ, ಗಮನ ಸೆಳೆಯುತ್ತದೆ. ಕುಂತಿ ಬಂದು, ಪಾಂಡವರೆಲ್ಲ ನಿನ್ನ ತಮ್ಮಂದಿರು, ನೀನು ಅವರನ್ನು ಸೇರು ಎಂದಾಗ ಕರ್ಣನದ್ದು ಸ್ಪಷ್ಟ ಉತ್ತರ. ಕರ್ಣ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಕುಂತಿ ಮೌನಿಯಾಗುತ್ತಾಳೆ. ಕುಂತಿಯ ಪಾದಗಳಿಗೆ ನಮಸ್ಕರಿಸಿದ ಕರ್ಣನ ಕಣ್ಣುಗಳಲ್ಲಿ ಕಣ್ಣೀರು. ಕುಂತಿ, ಕರ್ಣನನ್ನು ಸಾಕಿ ಸಲಹದಿದ್ದರೆನಂತೆ ಜನ್ಮಕೊಟ್ಟದ್ದು ಕಡಿಮೆಯೇ?

ಮುಂದುವರಿಯುತ್ತದೆ ......
.
ನಾನು ಬರಿದಿರುವುದು ನಿಮ್ಮ ಚಿಂತನೆಗೆ ಗ್ರಾಸವಾಗುವಂತಿದ್ದ'ರೆ' ನಿಮ್ಮ ಅನಿಸಿಕೆ ಯನ್ನು ಬರೆಯಿರಿ.
4 comments:
baravaNige chennagide
ಕನ್ನಡ-ಕನ್ನಡಿಗ-ಕರ್ನಾಟಕಗಳ ಏಳಿಗೆಗೆ ಬದ್ಧವಾದ ಬನವಾಸಿ ಬಳಗದ ಹೊಸ ಬ್ಲಾಗಿಗೊಮ್ಮೆ ಭೇಟಿಕೊಡಿ. ವಿಳಾಸ:
http://enguru.blogspot.com
ಉಮಾಶಂಕರ್,
ನಿಮ್ಮ ಬ್ಲಾಗಲ್ಲಿ ’ವಿಚಿತ್ರಾನ್ನ’ ಲಿಂಕ್ ಹಾಕಿದ್ದೀರಲ್ಲ? ಧನ್ಯವಾದ. ಆದರೆ ಅದು ಕೆಲ್ಸ ಮಾಡ್ತಿಲ್ಲ. ಅದರ ಯು ಆರ್ ಎಲ್ ನಲ್ಲಿ ಕೊನೆಗೆ ಒಂದು ’l' ಮಿಸ್ ಆಗಿದೆ. ’html' ಎಂದು ಇರಬೇಕು, ’htm' ಅಲ್ಲ. ಸರಿಪಡಿಸುತ್ತೀರಾ?
ಶ್ರೀವತ್ಸ ಜೋಶಿ ಯವರಿಗೆ ನಮಸ್ಕಾರ
’ವಿಚಿತ್ರಾನ್ನ’ ಲಿಂಕ್ ಸರಿಪಡಿಸಲು ತಿಳಿಸಿದಕ್ಕೆ ಧನ್ಯವಾದ.
Ee article odida nantara haleya ithihasa galannu odida nenapaithu ....mattu nanagu PARVA kate odabeku.....
Post a Comment